ಶನಿವಾರ, ಮಾರ್ಚ್ 1, 2014

ಪ್ರೇಮ ಸಂಜೆ 

ಇಳಿ  ಸಂಜೆಯಲಿ ನಿನ್ನೆದೆಗೆ ಒರಗಿ 
ಕಳೆದ ಆ ಸಂಧ್ಯಾಕಾಲ ನನಗಿನ್ನೂ ಕಣ್ಣಲ್ಲಿದೆ . 
ಆ  ಕ್ಷಣ ನನ್ನ ಹಣೆಗೆ ನೀನಿತ್ತ  ಹೂ ಮುತ್ತು 
 ಇಂದಿಗೂ  ಕಾಡುತಿದೆ ...

ಅಂದು ನಾ  ನಿನ್ನ ಪ್ರೀತಿಯಲಿ ಕಳೆದು ಹೋದ ಹಾಗೆ ನೆನಪು
ಇಂದಿಗೂ ಸಹ ... ನಿನ್ನ ಪ್ರೀತಿಯ ಮೊರೆತದಲಿ,
ನಾ  ಮೌನಿ... ನಿನ್ನ ಪ್ರೀತಿಯನು ಆಸ್ವಾದಿಸುವೆ
ನಿನ್ನ ಕನಸಿಗೆ ಕಣ್ಣಾಗುವೆ....
ನಿನ್ನ  ಮೌನಕೆ ಸಂಗಾತಿಯಾಗಿರುವೆ
ನಿನ್ನ ರಾಗಕ್ಕೆ ಗೀತೆಯಾಗಿರುವೆ ...
ರಾಗ ಮತ್ತು ಗೀತ ದೇವರೇ ಬೆಸೆದ ಕೊಂಡಿ
ರಾಗವಿರದ ಗೀತೆಯೇಲ್ಲಿದೆ ...!!

ಗುರುವಾರ, ಫೆಬ್ರವರಿ 20, 2014

ನನ್ನೊಲವಿನ ಇನಿಯ 





ಮನಸು ಬಯಸಿದೆ ನಿನ್ನ
ನಿನ್ನ ಸಾಂಗತ್ಯವನ್ನ ... 
ಮೆಲ್ಲನೆ ಮನದೊಳಗೆ ನೀ ಬಂದುದಾದರೂ
 ಹೇಗೆಂದು ಅರಿವಾಗಿಲ್ಲ ನನಗೆ,
ನನ್ನೊಳಗೆ ಮೂಡಿರುವ ಕನಸು ನೀನು, 
ಮನದಂಗಳಕೆ ಮೆಲ್ಲ  ಹೆಜ್ಜೆಯಿಟ್ಟ ಹೃದಯ ಚೋರ ನೀನು..

ತಿಳಿದೂ ತಿಳಿಯದಂತೆ 
ಕಂಡೂ ಕಾಣದಂತೆ 
ನನ್ನ ಸತಾಯಿಸುವ  ನಿನ್ನ ಪರಿಯೇನು...!!
ನೀ ಬರುವ ದಿನಕ್ಕಾಗಿ ಕಾದಿದೆ ನನ್ನೀ ಮನ 
ಮನದ ತುಂಬೆಲ್ಲ ನಿನ್ನದೇ ಹಂಬಲಿಕೆ 
ನಿನ್ನ ಸೇರುವ ಕ್ಷಣಗಳಿಗಾಗಿ ; ನಿನ್ನ ಪ್ರೀತಿಗಾಗಿ.. 

ನಿನ್ನದೇ ಧ್ಯಾನ 
ನಿನ್ನದೇ ಯಾನ...  
ನಿನ್ನ ಜೊತೆ ಸೇರಿ ಸಂಬ್ರಮಿಸುವ ಆಸೆ 
ಪ್ರತೀ ಕನಸನ್ನು ಕಾಯ್ದಿರಿಸಿರುವೆ ನಿನಗಾಗಿ 
ನಿನ್ನ ಹೊರತಾದ  ಲೋಕವೇ ಇಲ್ಲ 
ನನಗೆ ನೀನೇ ಎಲ್ಲ ...