ನಿನ್ನ ಬಿಸಿಯುಸಿರು ದಿನವೂ ನನ್ನ ಕದಪುಗಳಿಗೆ
ಸೋಕಲೆಂಬ ನನ್ನ ಬಯಕೆಯ ಹತ್ತಿಕ್ಕಿ ಮಗ್ಗುಲು ಬದಲಾಯಿಸಿ ಮಲಗುವಾಗ ಮನದಲೆನೊ ಅವ್ಯಕ್ತ ಭಾವದ ಹಾಜರೀ...
ನಿನ್ನೆದೆಗೆ ತಲೆಯಾನಿಸಿ ಮಲಗಿ ನಿನ್ನ ಎದೆ ಬಡಿತವ ಕೇಳುವ ಹಂಬಲವಾದರೂ ನಿನ್ನ ದಿವ್ಯ ಮೌನದಲಿ ನನ್ನಾಸೆಗೆ ಜೀವ ನೀಡಲಾಗದ ಹತಾಶ ಭಾವ ಮನದಲಿ...
ನನ್ನ ಮೌನದಲಿ ನಿನ್ನ ಭಾವನೆಗಳೆಷ್ಟೊ,
ಕನಸುಗಳೇಷ್ಟೊ , ಒಲವ ಒರತೆಗಳೇಷ್ಟೊ ,
ಹತ್ತಿಕ್ಕಲಾಗದ ನಿನ್ನ ತುಂಟತನಗಳೇಷ್ಟೊ ಬಣ್ಣ ಕಳೆದುಕೊಂಡದ್ದು ಗುರುತಿಸಲಾರದ ಭಾವ ನನ್ನಲ್ಲಿ...
ನಿನ್ನೆದೆಯಲಿ ಹುದುಗಿಸಿ ನನ್ನ ಮಂದಲೆಗೆ ಮುತ್ತಿಕ್ಕುವ ಉತ್ಕಟತೆಯ ಹತ್ತಿಕ್ಕಿದ
ನಿನ್ನ ನಿಟ್ಟುಸಿರು ನನಗೇನೊ ಹೇಳಲು ಕಾತರಿಸಿದಂತಿತ್ತು...
ಬದುಕಿನ ತುಂಬೆಲ್ಲ ಎಂದೂ ಸಂತಸದ ಹೊನಲೆ ಹರಿಯುತ್ತಿದ್ದರೆ ಬಹೂಷ್ಹ ಖುಷಿಯ ಭಾವಕ್ಕೆ
ಅರ್ಥವಿರುತ್ತಿರಲಿಕ್ಕಿಲ್ಲ..
ಒಲವ ಒರತೆ ಬತ್ತುವವರೆಗೆ ಪ್ರೀತಿಯ ಸೆಳೆತದಿಂದ , ನೋವಿನ ಬಿಸಿಯುಸಿರಿಂದ , ಒಲವಿನ ಹಂಬಲಿಕೆಯಿಂದ ದೂರ ಸರಿಯಲಾಗದು...
ದೂರ ಸರಿಯಲಾಗದು....