ಪುಟ್ಟ ಪುಟ್ಟ ಮೋಡಗಳು ಚಲಿಸುತ್ತವೆ..
ಗಗನವಿಡೀ ವಿಹರಿಸಲಾಗದಿದ್ದರೂ ಕೈ ಚೆಲ್ಲಿ ನಿಂತಿಲ್ಲ.. ನಿರಂತರತೆ.. ಗುರಿ ಸೇರುವ ತವಕವ ಹೊತ್ತು ಸಾಗುತ್ತಿವೆ...
ಆದರೆ ನನಗೇಕೆ ಚಲಿಸಲಾಗುತ್ತಿಲ್ಲ...
ನನಗೆ ಗಮ್ಯದ ಅರಿವಿಲ್ಲವೇ!!!!??
ಪ್ರಯತ್ನಿಸದೇ ಕೈ ಕಟ್ಟಿ ನಿಂತಿರುವೆನಾ....!!!???
ನನಗೇಕೊ ಭಾಸವಾಗುತ್ತಿದೆ,
ನಾನು ಗಮ್ಯದ ಅಂತಿಮ ದಾರಿಯಲ್ಲಿ ನಿಂತಿರುವೆನೆಂದು...
ಮುಂದೆ ದಾರಿಯಿಲ್ಲ...
ಹಿಂದಿರುಗಿ ಹೋಗುವಂತಿಲ್ಲ..!!
ಸಿಕ್ಕಿರುವ ಗಮ್ಯವೇ ನನ್ನವೆಂದು ಎಷ್ಟೇ ಪ್ರಯತ್ನಿಸಿದರೂ ಒಪ್ಪಲಾಗುತ್ತಿಲ್ಲ...
ಮನವೇಕೋ ಹಟ ಹಿಡಿದಂತಿದೆ...
ಹಿಂದಿರುಗಲಾಗದ ಅಂತಿಮ ಗಮ್ಯದೆದುರು ಸೋಲೊಪ್ಪದ ಮನಕೆ ಸಮಾಧಾನಿಸಲಾಗುತ್ತಿಲ್ಲ..
ಈ ಉಸಿರಿನ ಕೊನೆತನಕ ಪ್ರಕೃತಿಯ ಮಡಿಲಲ್ಲಿ
ತಣ್ಣನೆ ಮಲಗೆಂದು...