ನನ್ನೊಲವಿನ ಇನಿಯ
ನಿನ್ನ ಸಾಂಗತ್ಯವನ್ನ ...
ಮೆಲ್ಲನೆ ಮನದೊಳಗೆ ನೀ ಬಂದುದಾದರೂ
ಹೇಗೆಂದು ಅರಿವಾಗಿಲ್ಲ ನನಗೆ,
ನನ್ನೊಳಗೆ ಮೂಡಿರುವ ಕನಸು ನೀನು,
ಮನದಂಗಳಕೆ ಮೆಲ್ಲ ಹೆಜ್ಜೆಯಿಟ್ಟ ಹೃದಯ ಚೋರ ನೀನು..
ತಿಳಿದೂ ತಿಳಿಯದಂತೆ
ಕಂಡೂ ಕಾಣದಂತೆ
ನನ್ನ ಸತಾಯಿಸುವ ನಿನ್ನ ಪರಿಯೇನು...!!
ನೀ ಬರುವ ದಿನಕ್ಕಾಗಿ ಕಾದಿದೆ ನನ್ನೀ ಮನ
ಮನದ ತುಂಬೆಲ್ಲ ನಿನ್ನದೇ ಹಂಬಲಿಕೆ
ನಿನ್ನ ಸೇರುವ ಕ್ಷಣಗಳಿಗಾಗಿ ; ನಿನ್ನ ಪ್ರೀತಿಗಾಗಿ..
ನಿನ್ನದೇ ಧ್ಯಾನ
ನಿನ್ನದೇ ಯಾನ...
ನಿನ್ನ ಜೊತೆ ಸೇರಿ ಸಂಬ್ರಮಿಸುವ ಆಸೆ
ಪ್ರತೀ ಕನಸನ್ನು ಕಾಯ್ದಿರಿಸಿರುವೆ ನಿನಗಾಗಿ
ನಿನ್ನ ಹೊರತಾದ ಲೋಕವೇ ಇಲ್ಲ
ನನಗೆ ನೀನೇ ಎಲ್ಲ ...
