ಶನಿವಾರ, ಜೂನ್ 16, 2018



ದೇವಲೋಕದ ಪಾರಿಜಾತ

ನೀಲಾಗಸದಿ ಚುಕ್ಕಿ ತಾರೆಯರ ಸಂಭ್ರಮ
ಬಿದಿಗೆ ಚಂದ್ರನ ಪಯಣದೊಂದಿಗೆ
ರಂಗು ರಂಗಿನ ಕನಸಿನ ಲೋಕದಲ್ಲಿ
ನಿನ್ನೊಲವಿನ ಮೆರವಣಿಗೆಯ ಪಲ್ಲಕ್ಕಿಯಲಿ
ಸಂಭ್ರಮದಿಂದ ನಾ ಕುಳಿತು ಹೊರಟಿದ್ದೆ
ದೇವಲೋಕದ ಮುದ್ದಾದ ಹೂವನರಸಿ

ಹಚ್ಚ ಹಸುರಿನ ಹೂ ಹಾಸಿಗೆಯಲಿ
ಬೆಚ್ಚಗಿನ ಕನಸುಗಳ ಕಾಮನಬಿಲ್ಲು
ಬದುಕೆಲ್ಲ ನೀನಿರಲು ಜೊತೆಯಾಗಿ
ಕನಸೆಲ್ಲ ಸೊಗಸಾಗಿ ಕುಣಿದಾಡುತಿರಲು
ಸೋನೆ ಮಳೆಯು ಜೊತೆಯಾಗಿ ಸುರಿಯುತಿರಲು
ನಿನ್ನ ಪ್ರೀತಿಯಲಿ ಹದವಾಗಿ ತೊಯ್ದoತೆ..

ಬದುಕೆಲ್ಲ ಪ್ರೀತಿ ಮಳೆಯ ಹರಿಸಿದವ
ಮನಸಿನ ಮಾತು ತುಟಿಯಮೇಲೆ
ಬರುವ ಮುಂಚೆ ಅರಿತು ನಡೆದವ
ನಿನ್ನ ಬದುಕಿನ ಎಲ್ಲ ಖುಷಿಯ ಧಾರೆ ಎರೆದವ
ಎಂದೆಂದಿಗೂ ಆಗಬಯಸುವೆ ನಾನಿನ್ನ
ದೇವಲೋಕದ ಪಾರಿಜಾತ..

Photo credits : Google

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ